31/10/2024
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬ ಪ್ರತಿಯೊಬ್ಬರ ಬದುಕಿನಲ್ಲಿ ಹೊಸ ಬೆಳಕಾಗಿ ಸಂತೋಷ, ಸಮೃದ್ಧಿ, ಸಡಗರ ತರಲಿ. ಈ ಬಾರಿಯ ದೀಪಾವಳಿ ನಿಮ್ಮ ಬಾಳಿನಲ್ಲಿ ಹೊಸ ಭರವಸೆಯನ್ನು ಮೂಡಿಸಲಿ ಎಂದು ಶುಭ ಹಾರೈಸುತ್ತೇನೆ.
ೀಪಾವಳಿ:- ಧನ ತ್ರಯೋದಶಿ- ಮತ್ತು ನರಕ ಚತುರ್ದಶಿ ಹಬ್ಬ :-
ಹಬ್ಬಗಳಿಗೆಲ್ಲ ರಾಜನಾದ ದೀಪಾವಳಿ (ದೀಪಗಳ ಸಾಲು) ಅಜ್ಞಾನದ ಕತ್ತಲೆ ಕಳೆದು ಬೆಳಕಿನ ಜ್ಞಾನವನ್ನು ಹರಡುವ ದೀಪಾವಳಿ. ಈ ಹಬ್ಬವನ್ನು ಎಲ್ಲಾ ಜಾತಿ ಜನಾಂಗದ ವರು ಆಚರಿಸುತ್ತಾರೆ. ಬದುಕಲು ಬೆಳಕು ಆಧಾರ. ಮಳೆಗಾಲ ಕಳೆದು ಚಳಿಗಾಲ ಬರುವ ಮಧ್ಯ ಭಾಗದ ಈ ಕಾಲದಲ್ಲಿ ಬೆಳಗುವ ದೀಪ ದಿಂದ ನಕಾರಾತ್ಮಕ ಶಕ್ತಿ ಯು ದೂರವಾಗಿ, ನವ ಚೈತನ್ಯವನ್ನು ತುಂಬಿ ಮನುಷ್ಯನನ್ನು ಆರೋಗ್ಯ ವಂತರ ನ್ನಾಗಿ ಮಾಡುತ್ತದೆ. ದೀಪಾವಳಿ ಹಬ್ಬದ ಸಮಯಕ್ಕೆ ಫಲ-ಪುಷ್ಪ- ಬೆಳೆಗಳು ಬಂದಿರುತ್ತದೆ. ಈ ಕಾರಣಕ್ಕಾಗಿ ನರಕ ಚತುರ್ದಶಿ ಹಿಂದಿನ ದಿನ ಧನ ತ್ರಯೋಧಶಿ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ.
ಇದಕ್ಕೊಂದು ಪುರಾಣದ ಪುಟ್ಟ ಕಥೆ ಇದೆ. ( ಇದಲ್ಲದೆ “ಧನ್ವಂತರಿ” ಕಥೆ ಹಾಗೆ ಬೇರೆ ಬೇರೆ ಕಥೆಗಳು ಇವೆ) ನಾರಾಯಣನಿಗೆ ಭೂಲೋಕ ಪರಿಭ್ರಮಣ ಮಾಡುವುದು ಬಹಳ ಪ್ರಿಯವಾದದ್ದು. ಅವನು ಆಗಾಗ್ಗೆ ಭೂಲೋಕಕ್ಕೆ ಬರುತ್ತಿದ್ದ. ಹೀಗೊಮ್ಮೆ ಹೊರಟಾಗ ಲಕ್ಷ್ಮಿ, ತಾನು ಬರುವುದಾಗಿ ಹೇಳಿದಳು. ಲಕ್ಷ್ಮೀನಾರಾಯಣರು ಭೂಮಿ ಸಂಚಾರಕ್ಕೆ ಹೊರಟು ದಕ್ಷಿಣ ದಿಕ್ಕಿಗೆ ಬಂದರು, ಲಕ್ಷ್ಮಿಗೆ ನೀನು ಇಲ್ಲೇ ಇರು ಉತ್ತರ ದಿಕ್ಕಿನ ಕಡೆ ಮಾತ್ರ ಹೋಗಬೇಡ ನಾನು ಒಂದು ಮಹತ್ತರವಾದ ಕೆಲಸ ಮುಗಿಸಿಕೊಂಡು ಬರುತ್ತೇನೆ ಎಂದು ಶ್ರೀ ಹರಿ ಹೊರಟನು. ಚಂಚಲ ಸ್ವಭಾವದ ಲಕ್ಷ್ಮಿ ಕುತೂಹಲ ತಡೆಯಲಾರದೆ ನಡೆಯುತ್ತಾ ಮುಂದೆ ಹೋದಳು.
ಆಗನ್ನು ಮಳೆಗಾಲ ಮುಗಿದು ಎಲ್ಲೆಲ್ಲೂ ಹಸಿರು ಚಿಗುರಿತ್ತು. ಉದ್ಯಾನವನದಲ್ಲಿ ಹೂವು ಹಣ್ಣು ತುಂಬಿತ್ತು. ಅದನ್ನೆಲ್ಲ ನೋಡು ನೋಡುತ್ತಲೇ ಉತ್ತರ ದಿಕ್ಕಿಗೆ ಬಂದಳು ಅಲ್ಲಿ ರೈತನ ಹೊಲದಲ್ಲಿ ಕಬ್ಬು ಬೆಳೆದಿದ್ದು, ಹಾಗೂ ತೋಟದಲ್ಲಿ ಲವಂಗದ ಒ\ಹೂಗಳು ಅರಳಿತ್ತು . ಲಕ್ಷ್ಮಿ ಸಿಹಿಯಾದ ಕಬ್ಬನ್ನು ಕಿತ್ತು ತಿಂದಳು ಹಾಗೆ ಬಣ್ಣ ಬಣ್ಣದ ಹೂಗಳನ್ನು ಬಿಡಿಸಿಕೊಂಡು ದಂಡೆ ಮುಡಿದು ತನ್ನನ್ನು ತಾನು ಸಿಂಗರಿಸಿ ಕೊಂಡು ಸಂತೋಷ ಪಟ್ಟಳು. ಆ ಸಮಯಕ್ಕೆ ನಾರಾಯಣನು ತನ್ನ ಕಾರ್ಯವನ್ನು ಮುಗಿಸಿ ಬಂದನು, ಲಕ್ಷ್ಮಿಯನ್ನು ನೋಡಿ, ನಾರಾಯಣನಿಗೆ ಕೋಪ ಬಂತು. ನಾನು ಅಷ್ಟು ಸಾರಿ ಹೇಳಿದ್ದೆ ಉತ್ತರ ದಿಕ್ಕಿನ ಕಡೆ ಹೋಗಬೇಡ ಎಂದು ಆದರೂ ಕೇಳದೆ ಹೋಗಿದ್ದಲ್ಲದೆ, ರೈತನ ಅನುಮತಿ ಇಲ್ಲದೆ ಅವನು ಬೆಳೆದ ಕಬ್ಬನ್ನು ತಿಂದು, ತೋಟದಲ್ಲಿ ಅರಳಿದ ಹೂವಿನಿಂದ ಅಲಂಕರಿಸಿಕೊಂಡಿರುವೆ ಹೀಗೆ ಮಾಡಿದ್ದು ತಪ್ಪು. ಆದ ಕಾರಣ ರೈತನ ಮನೆಯಲ್ಲಿ ಕೆಲವು ಕಾಲ ಇದ್ದು ಅವನ ಮನೆ ಮತ್ತು ಹೊಲದ ಕೆಲಸ ಮಾಡಬೇಕು ಎಂದವನೆ ವೈಕುಂಠಕ್ಕೆ ಹೊರಟು ಬಿಟ್ಟನು.
ಲಕ್ಷ್ಮಿ ಹುಡುಗಿಯಾಗಿ ರೈತನ ಮನೆಗೆ ಹೋದಳು. ಆ ಮನೆಯ ಯಜಮಾನ ಮಾಧವ. ರೈತನಲ್ಲಿ ಲಕ್ಷ್ಮಿ ಹೇಳಿದಳು ನಾನು ದಾರಿ ತಪ್ಪಿ ಬಂದಿರುವೆ ಆಹಾರ ನೀರು ಇಲ್ಲದೆ ಒದ್ದಾಡುತ್ತಿರುವೆ. ಕೆಲವು ಕಾಲ ನಿಮ್ಮ ಮನೆಯಲ್ಲಿ ಇರಬಹುದೇ ಎಂದು ಕೇಳಿದಳು. ರೈತ ಬಹಳ ಒಳ್ಳೆಯವನು ಆಯಿತು ನನಗೂ ಮೂರು ಜನ ಹೆಣ್ಣು ಮಕ್ಕಳು ನೀನು ಒಬ್ಬಳು ಆಗುವೆ. ನಾವು ತುಂಬಾ ಬಡವರು ನಮ್ಮ ಮನೆಯಲ್ಲಿ ಏನು ಮಾಡುತ್ತೆವೊ ಅದನ್ನೇ ನಿನಗೂ ಕೊಡುವೆ ಎಂದಾಗ ಲಕ್ಷ್ಮಿ ಸಂತೋಷದಿಂದ ಒಪ್ಪಿ ಅವರ ಮನೆ ಒಳಗೆ ಕಾಲಿಟ್ಟಳು. ಮಾಧವನ ಪತ್ನಿ ಕೋಮಲ ಹಾಗೂ ಅವನ ಮೂರು ಮಕ್ಕಳು ಲಕ್ಷ್ಮಿಯನ್ನು ಆದರದಿಂದ ಬರಮಾಡಿಕೊಂಡರು. ಲಕ್ಷ್ಮಿ ಒಳಗೆ ಕಾಲಿಟ್ಟಳು ಕೇಳಬೇಕೇ? ಕಾಲಿಟ್ಟ ದಿನದಿಂದಲೇ ಒಂದರ ಮೇಲೆ ಒಂದು ಒಳ್ಳೆಯದಾಗುತ್ತಾ ಬಂತು ಬೆಳೆ ಚೆನ್ನಾಗಿ ಬಂತು, ಹಸು ಕರು ತೆಗೆದುಕೊಂಡ ಹಾಲು ಹೈನು ತುಂಬಿತು, ಚಂದದ ಮನೆ ಕಟ್ಟಿದ ಸಂಪತ್ತು ಹುಡುಕಿ ಕೊಂಡು ಬಂದಿತು. ರೈತ ಮತ್ತು ಅವನ ಪತ್ನಿ, ಲಕ್ಷ್ಮಿಯನ್ನು ತಮ್ಮ ಮಗಳಂತೆ ನೋಡಿಕೊಳ್ಳುತ್ತಿದ್ದರು. ಲಕ್ಷ್ಮಿ ರೈತನ ಹೆಂಡತಿಗೆ ಮನೆಯ ಕೆಲಸದಲ್ಲಿ ಸಹಾಯ ಮಾಡಿ, ಮಾಧವನ ಹೊಲದಲ್ಲೂ ಕೆಲಸ ಮಾಡುತ್ತಿದ್ದಳು.
ರೈತನ ಪತ್ನಿಗೆ ಲಕ್ಷ್ಮೀನಾರಾಯಣರ ಪೂಜೆಯ ಮಾಡುವಂತೆ ಹೇಳಿದಳು. ರೈತನ ಹೆಂಡತಿ ಪ್ರತಿನಿತ್ಯ ಪೂಜಿಸುತ್ತಾ ಬಂದಳು ರೈತನ ಸಂಪತ್ತು ಹೆಚ್ಚಾಗಿ ಧನ ಧಾನ್ಯಗಳಿಂದ ಮನೆ ತುಂಬಿತು.
ವಿಷ್ಣು ಕೊಟ್ಟ ಅವಧಿ ಮುಗಿಯಿತು ಸಾಕ್ಷಾತ್ ನಾರಾಯಣನೇ ಲಕ್ಷ್ಮಿಯನ್ನು ಕರೆದೊಯ್ಯಲು ಚಿನ್ನದ ರಥ ತೆಗೆದುಕೊಂಡು ಭೂಮಿಗೆ ಬಂದನು. ರೈತನಲ್ಲಿ ಲಕ್ಷ್ಮಿಯನ್ನು ಕಳಿಸಿ ಕೊಡು ಎಂದು ಕೇಳಿದರೆ, ರೈತನು ನಮ್ಮ ಮಗಳನ್ನು ಕಳಿಸುವುದಿಲ್ಲ ಎಂದನು. ಯಾರೇ ಹೇಳಿದರು ರೈತ ಒಪ್ಪಲಿಲ್ಲ. ಆಗ ಲಕ್ಷ್ಮಿಯೇ ರೈತನನ್ನು ಸಮಾಧಾನ ಪಡಿಸಿ, ನಾನು ವೈಕುಂಠ ಪತಿ ನಾರಾಯಣನ ಪತ್ನಿ, ನಿಮ್ಮ ಮನೆಗೆ ಬರಬೇಕಾದ ಸಂದರ್ಭ ಬಂದಿತು ನನ್ನನ್ನು ಇಷ್ಟು ವರ್ಷಗಳು ಮಗಳಂತೆ ಬಹಳ ಚೆನ್ನಾಗಿ ನೋಡಿಕೊಂಡಿದ್ದೀರಿ. ನಾಳೆ ಆಶ್ವೀಜ ಮಾಸದ ಕೃಷ್ಣ ಪಕ್ಷದ ‘ತ್ರಯೋದಶಿ’ ಬಂದಿದೆ. ಸಂಜೆ ಲಕ್ಷ್ಮಿ ಸ್ವರೂಪವಾದ ದವಸ -ಧಾನ್ಯ, ಒಂದು ಕಲಶ ಮತ್ತು ಹಣ ಇಟ್ಟು ಹೂವುಗಳಿಂದ ಸಿಂಗರಿಸಿ ಧೂಪ ದೀಪ ಗಳಿಂದ ಪೂಜಿಸಿರಿ. ನಿಮ್ಮ ಮನೆಯಲ್ಲಿಯೇ ನೆಲೆಸುತ್ತೇನೆ ಪ್ರತಿ ವರ್ಷವೂ ತ್ರಯೋಧಶಿ ದಿನ ಬರುವೆ ಎಂದು ಹೇಳಿ, ತನ್ನ ದಿವ್ಯ ಪ್ರಭೆಯನ್ನು ಅವನ ಮನೆಯ ಸುತ್ತಲೂ ಹರಡಿ ಅದೃಶ್ಯ ಳಾದಳು. ಅಂದಿನಿಂದ ಆಶ್ವೀಜ ಮಾಸದ ತ್ರಯೋದಶಿಯನ್ನು “ಧನ ತ್ರಯೋದಶಿ” ಎನ್ನುತ್ತಾರೆ. ಆ ದಿನ ಬೆಳೆದ ಬೆಳೆಗಳನ್ನು, ದವಸ ಧಾನ್ಯಗಳನ್ನು ಒಟ್ಟುಗೂಡಿಸಿ ಲಕ್ಷ್ಮಿ ಎಂದು ಪ್ರತಿಷ್ಠಾಪಿಸಿ ಹಾಗೂ ನಾಣ್ಯಗಳು ತುಂಬಿದ ಕಲಶ ಇಟ್ಟು ಸಂಕಲ್ಪ ಮಾಡಿ, ಗಂಧ ಅರಿಶಿನ ಕುಂಕುಮಗಳ ಹಚ್ಚಿ, ಹೂ ಮಾಲೆ ಹಾಕಿ, ಗಂಗೆಯ ಪೂಜೆ ಹಾಗೆ ಬಚ್ಚಲು ಮನೆಯಲ್ಲಿ ತೊಳೆದು ನೀರು ತುಂಬಿದ ಹಂಡೆ. ಒಲೆ, ಕೊಟ್ಟಿಗೆ, ಇವೆಲ್ಲವೂ ಲಕ್ಷ್ಮೀ ಸ್ವರೂಪವೆಂದು ಪೂಜೆ ಮಾಡುತ್ತಾರೆ.ಈ ದಿನ ಮಾಡಿದ ‘ಗಂಗೆ’ ಪೂಜೆ ನೀರನ್ನು ‘ನರಕ ಚತುರ್ದಶಿ’ ದಿನ ಅಂದರೆ ಮರುದಿನ ಹಂಡೆಗೆ ಹಾಕಿಕೊಂಡು ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಉಲ್ಲೇಖವಿದೆ.
ನರಕ ಚತುರ್ದಶಿ:
ನರಕ ಚತುರ್ದಶಿ ಹಬ್ಬದ ಪೌರಾಣಿಕ ಹಿನ್ನೆಲೆ. ಮಹಾ ವಿಷ್ಣು ವರಾಹಾವ ತಾರದಲ್ಲಿದ್ದಾಗ, ಅವನ ದೇಹದಿಂದ ಒಂದು ಬಿಂದು ಬೆವರು ಭೂಮಿಗೆ ಬೀಳುತ್ತದೆ. ಆ ಬಿಂದುವಿನಿಂದ ಭೂಮಿ ದೇವಿಯ ಗರ್ಭದಲ್ಲಿ “ನರಕಾಸುರ” ಜನಿಸುತ್ತಾನೆ. ಅವನಿಗೆ ಭೂಮಿಪುತ್ರ ಮತ್ತು ಬೌಮಾಸುರ ಅಂತ ಹೆಸರು ಬಂದಿತು. ಭೂದೇವಿಯು ಮಗನ ಮೇಲಿನ ವ್ಯಾಮೋಹದಿಂದ ವಿಷ್ಣುವನ್ನು ಕೇಳಿ ನರಕಾಸುರನಿಗೆ ವೈಷ್ಣವಾಸ್ತ್ರವನ್ನು ಕೊಡಿಸುತ್ತಾಳೆ. ಮೊದಲೇ ಬಲಶಾಲಿಯಾಗಿದ್ದ ನರಕಾಸುರ ವೈಷ್ಣವಾಸ್ತ್ರ ಸಿಕ್ಕಿದ್ದೇ ಮತ್ತಷ್ಟು ಬಲಿಷ್ಠನಾಗಿ ರಾಕ್ಷಸ ಗುಣವನ್ನು ಹೆಚ್ಚಿಸಿಕೊಂಡನು. ಭೂಮಿಯಲ್ಲಿ ಋಷಿಮುನಿಗಳಿಗೆ ತೊಂದರೆ ಕೊಡುತ್ತಿದ್ದನು. ನಂತರ ದೇವ ಲೋಕಕ್ಕೆ ಲಗ್ಗೆ ಇಟ್ಟನು. ದೇವರಾಜ ಇಂದ್ರ ಮತ್ತು ಅವನ ತಾಯಿ ಅಧಿತಿಗೆ ಕಾಟ ಕೊಡಲಾರಂಬಿಸಿದನು. ಅವನ ಕಾಟ ತಡೆಯದೆ ದೇವೇಂದ್ರನು ವಿಷ್ಣುವಿನಲ್ಲಿ ಮೊರೆ ಹೋದನು. ನರಕಾಸುರನಿಂದ ತನಗೆ ಬಂದಿರುವ ತೊಂದರೆ ಪರಿಹರಿಸಲು ಬೇಡಿದನು. ಈ ಸಮಯದಲ್ಲಿ ಭೂಮಿ ತಾಯಿಯು ಸಹ ಮಗನ ಉಪಟಳ ಸಹಿಸಲಾರದೆ, ಅವನನ್ನು ಸಂಹರಿಸುವಂತೆ ನಾರಾಯಣನಲ್ಲಿ ಬೇಡಿ ದಳು. ಆಶ್ವಿಜಮಾತ್ರ ಕೃಷ್ಣ ಪಕ್ಷದ ಚತುರ್ದಶಿಯ ಕಾಡಗತ್ತಲಿನಲ್ಲಿ ನರಕಾಸುರ ನೊಡನೆ ಕೆಲವು ದಿನಗಳು ಯುದ್ಧ ಮಾಡಿ ಅವನನ್ನು ಚತುರ್ದಶಿ ಬೆಳಗಿನ ಜಾವ ಸಂಹರಿಸಿ, ಲೋಕದಲ್ಲಿ ಶಾಂತಿ ನೆಲೆಸುವಂತೆ ಮಾಡಿದ. ಯುದ್ಧ ಮಾಡಿದ ಆಯಾಸ, ರಕ್ತ ತುಂಬಿದ ವಸ್ತ್ರ, ಕಾದಾಡಿ ಮಣ್ಣು ಬೆವರಿನಿಂದ ತುಂಬಿದ ಶರೀರ. ಯುದ್ಧ ಭೂಮಿಯಿಂದ ಬಂದ ಶ್ರೀ ಕೃಷ್ಣನಿಗೆ ರುಕ್ಮಿಣಿ ಸತ್ಯಭಾಮೆಯರು ಹರಳೆಣ್ಣೆಯನ್ನು ನೆತ್ತಿಗೆ ಒತ್ತಿ ಮೈ ಕೈಯ್ಯಗೂ ನೀವಿ ಹಂಡೆಯಲ್ಲಿದ್ದ ಬಿಸಿಬಿಸಿ ನೀರಿನಿಂದ ಅಭ್ಯಂಗ ಸ್ನಾನವನ್ನು ಮಾಡಿಸಿದರು, ನಂತರ ಹೊಸ ವಸ್ತ್ರ ಧರಿಸಿದನು.
ವಿಷ್ಣು ವರಹಾವತಾರದಲ್ಲಿದ್ದಾಗ ಭೂಮಿ ಮೇಲೆ ಬಿದ್ದ ಬೆವರಿನ ಹನಿಯಿಂದ ಹುಟ್ಟಿದ ಮಗ ನರಕಾಸುರ ಆಗಿರುತ್ತಾನೆ. ಹೀಗಾಗಿ ಭೂಮಿ ತಾಯಿಯಾದರೆ ತಂದೆ ವಿಷ್ಣು ಆಗುತ್ತಾನೆ. ಮಗನ ಸಂಬಂಧವಿದ್ದು ಸಂಹಾರ ಮಾಡಿದ್ದ ಕಾರಣ ಸ್ನಾನ ಮಾಡಿ ಬೇರೆ ಮಡಿ ವಸ್ತ್ರ ಹಾಕಿ ಕೊಳ್ಳುತ್ತಾನೆ. ಮೈ ಮನಸ್ಸು ಹಗುರವಾಯಿತು. ನಂತರ ಸಿಹಿಯಾದ ಸವಿಯಾದ ಭೋಜನವನ್ನು ಮಾಡಿದನು. ಶ್ರೀ ಕೃಷ್ಣನು ಮಾಡಿದ ಈ ಕಾರ್ಯ ಕಾರ್ತಿಕ ಮಾಸದ ಚತುರ್ದಶಿ ದಿನವನ್ನು ,( ಬೆಳಗಿನ ಜಾವ ನಾಲ್ಕು ಗಂಟೆಗೆ ಅಭ್ಯಂಗ ಸ್ನಾನ ಮಾಡಬೇಕು) ಹಬ್ಬದ ದಿನವಾಗಿ ಆಚರಣೆ ಮಾಡುತ್ತಾರೆ . ದುಷ್ಟ ರಾಕ್ಷಸನ ಸಂಹಾರ ಮಾಡಿದ ಸಂಭ್ರಮಕ್ಕಾಗಿ ಅಭ್ಯಂಗ ಸ್ನಾನ ಮಾಡಿ ಎಣ್ಣೆ ಸ್ನಾನ ಹೊಸ ಬಟ್ಟೆ ಧರಿಸುವುದು ಪಟಾಕಿ ಸಿಡಿಸುವುದು ಸಿಹಿ ಬೋಜನ ಮಾಡುವುದು ರೂಢಿಯಾಗಿ ಬಂದಿದೆ. ಅಂಧಕಾರ ಅಳಿಸಿ ಬೆಳಕಿನ ಸಾಲು ದೀಪ ಹಚ್ಚುತ್ತಾರೆ. ದೇವಸ್ಥಾನಗಳಿಗೆ ಹೋಗುತ್ತಾರೆ. ಮನೆಯಲ್ಲಿ ವಿಶೇಷವಾಗಿ ಮನೆ ದೇವರ ಪೂಜೆ ಹೊಸಿಲ ಪೂಜೆ, ಗೋಪೂಜೆ, ತುಳಸಿ ಪೂಜೆ, ಗೋವುಗಳಿಗೆ ಗೋಗ್ರಾಸ ಇಡುತ್ತಾರೆ ದೀಪಾವಳಿ ಹಬ್ಬದ ಆಚರಣೆ ನಾಲ್ಕೈದು ದಿನಗಳು ನಡೆಯುತ್ತದೆ. ಬಂಧು ಬಾಂಧ ವರೊಂದಿಗೆ ಖುಷಿಖುಷಿಯಾಗಿ ಭೋಜನ ಮಾಡುತ್ತಾರೆ.
ನೀರಿನಲ್ಲಿ ಗಂಗೆ, ಎಣ್ಣೆಯಲ್ಲಿ ಲಕ್ಷ್ಮಿ ಇರುತ್ತಾರೆ. ಆದ್ದರಿಂದ ಎಣ್ಣೆ ಹಚ್ಚಿಕೊಂಡು ಅಭ್ಯಂಜನ ಮಾಡಿ ಹೊಸ ಬಟ್ಟೆ ಹಾಕಿಕೊಳ್ಳುತ್ತಾರೆ. ಇವೆಲ್ಲ ಆಯುರಾರೋಗ್ಯ ಭಾಗ್ಯ ಎಂಬ ನಂಬಿಕೆ ಇದೆ ಪಾಪಗಳ ನಿವಾರಣೆಯಾಗುತ್ತದೆ. ನರಕಾಸುರನ ಸಾಯುವ ಮುನ್ನ ತನ್ನ ನೆನಪಿಗಾಗಿ ತನ್ನ ಹೆಸರಿನಿಂದ ಈ ದಿನ ಹಬ್ಬ ಮಾಡಬೇಕು ಎಂದು ಕೃಷ್ಣನಿಂದ ವರ ಪಡೆದಿದ್ದ. ನರಕಾಸುರನ ಜೊತೆ ಎಂಟು ಹತ್ತು ದಿನಗಳ ಕಾಲ ಯುದ್ಧ ಮಾಡಿ ಸಾಕಷ್ಟು ಸಾಕಷ್ಟು ದಣಿದಿದ್ದ, ಹಾಗೂ ವರಹಾವತಾರದಲ್ಲಿ ಹನಿ ಬೆವರು ಭೂಮಿಗೆ ಬಿದ್ದು ಅದರಿಂದ ಹುಟ್ಟಿದ ನರಕಾಸುರ ಭೂಮಿ ದೇವಿ ಮತ್ತು ಮಹಾ ವಿಷ್ಣುವಿನ ಮಗನು ಆಗಿದ್ದ. ಹೀಗಾಗಿ ಶ್ರೀ ಕೃಷ್ಣನು ದೇಹ ಮನಸ್ಸು ಶುದ್ದಿ ಮಾಡಿಕೊಳ್ಳಲು ಎಣ್ಣೆ ಹಚ್ಚಿ ಕೊಂಡು ಅಭ್ಯಂಜನ ಮಾಡುತ್ತಾನೆ. ದುಷ್ಟ ಸಂಹಾರದ ಸಂಭ್ರಮಕ್ಕಾಗಿ ಎಣ್ಣೆ ಸ್ನಾನ, ಹೊಸ ಬಟ್ಟೆ, ಪಟಾಕಿ ಸಿಡಿಸುವುದು ಸಿಹಿ ಸಿಹಿ ಬೋಜನ ಮಾಡುವುದು ರೂಢಿಯಾಗಿ ಬಂದಿದೆ.
ನಮೋಸ್ತು ನಾರಾಯಣ ಮಂದಿರಾಯ
ನಮೋಸ್ತು ಹಾರಾಯಣ ಕಂದರಾಯ!
ನಮೋಸ್ತು ಮತ್ಸ್ಯಾಯ ಲಯಾಬ್ದಿಗಾಯ
ನಮೋಸ್ತು ಕೂರ್ಮಾಯ ಪಯೋಬ್ದಿಗಾಯ !
ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು... 💐🙏🏻
Dear Good morning, I extend my warmest greetings to you and your family members on the occasion of Festival of Lights "DEEPAWALI". On this auspicious occasion let us all pledge to light up the hearts of our fellow human beings by propagating the values of mutual
Wishing you joy, prosperity, and success in all your endeavors this Diwali! Let the festival fill your heart with happiness.
Happy Diwali !!"The inner significance of Deepavali is to lead man from darkness to light. Man is perpetually plunged in darkness. Every time he is enveloped in darkness, he should light a lamp that is ever shining within him. Carry that lamp wherever you go. It will light your path wherever you may be."
"The inner significance of Deepavali is to lead man from darkness to light. Man is perpetually plunged in darkness. Every time he is enveloped in darkness, he should light a lamp that is ever shining within him. Carry that lamp wherever you go. It will light your path wherever you may be."